Trinity ITI College




ವರದಿ ಸ್ವಚ್ಛತಾ ಕಾರ್ಯಕ್ರಮ ದಿನಾಂಕ: 01/10/2026 ಸ್ಥಳ: ಟ್ರಿನಿಟಿ ಐಟಿಐ, ಉದ್ಯಾವರ ಇಂದು ದಿನಾಂಕ 01/10/2026 ರಂದು ಟ್ರಿನಿಟಿ ಕೈಗಾರಿಕಾ ತರಬೇತಿ ಸಂಸ್ಥೆ, ಉದ್ಯಾವರ, ಉಡುಪಿ ಜಿಲ್ಲೆ ವತಿಯಿಂದ *ಸ್ವಚ್ಛತಾ ಕಾರ್ಯಕ್ರಮ*ವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವು *ಜ್ಞಾನ ಸಾಧನಾ ಎಜುಕೇಶನ್ ಟ್ರಸ್ಟ್ (ರಿ), ಉದ್ಯಾವರ* ಇವರ ಪ್ರಾಯೋಜಕತ್ವದಲ್ಲಿ ನಡೆಯಿತು. ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಸಂಸ್ಥೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಸ್ವಚ್ಛ ಭಾರತದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಯಿತು.